ಸಾಹಿತ್ಯಿಕ ಚಟುವಟಿಕೆಗಳು ಅರ್ಥಪೂರ್ಣ ಬದುಕಿನ ಪೂರಕ ಸಾಧನ: ವಿದುಷಿ ಡಾ.ಪಿ.ಎಚ್.ವಿಜಯಲಕ್ಷ್ಮಿಬೀರೂರು, ಹೆತ್ತ ತಾಯಿ ಮತ್ತು ಜನ್ಮ ನೀಡಿದ ನಾಡು ಎರಡೂ ಸ್ವರ್ಗಕ್ಕಿಂತ ಮಿಗಿಲು. ಕರ್ನಾಟಕದ ಅಧಿಕೃತ ಭಾಷೆಯಾದ ಕನ್ನಡ ನುಡಿ ಬಳಕೆ ಮತ್ತು ಸಂರಕ್ಷಣೆ ಜವಾಬ್ದಾರಿಯೊಂದಿಗೆ ಅಸ್ಥಿತ್ವಕ್ಕೆ ಬಂದ ಕನ್ನಡ ಸಾಹಿತ್ಯ ಪರಿಷತ್ತು ಕನ್ನಡಿಗರ ಮನೆ-ಮನಗಳಲ್ಲಿ ಎಲ್ಲೆಡೆ ಪ್ರಸರಣ ಮತ್ತು ಪ್ರಚಾರದ ಬಹುದೊಡ್ಡ ಗಮ್ಯದೊಂದಿಗೆ ತನ್ನ ಧ್ಯೇಯೋದ್ದೇಶಗಳನ್ನು ಸಾಕ್ಷಾತ್ಕರಿ ಸುವಲ್ಲಿ ಕಾರ್ಯಪ್ರವೃತ್ತವಾಗಬೇಕು ಎಂದು ಸಮ್ಮೇಳನಾಧ್ಯಕ್ಷೆ ವಿದುಷಿ ಡಾ.ಪಿ.ಎಚ್.ವಿಜಯಲಕ್ಷ್ಮಿ ತಿಳಿಸಿದರು.