ವರುಣಾರ್ಭಟ: ಶೃಂಗೇರಿಗೆ ಜಲದಿಗ್ಬಂಧನಶೃಂಗೇರಿ, ತಾಲೂಕಿನಾದ್ಯಂತ ಅಬ್ಬರಿಸಿದ ಮಳೆಗೆ ತುಂಗಾನದಿಯಲ್ಲಿ ಉಂಟಾದ ಪ್ರವಾಹದಿಂದ ಇಡೀ ಜನಜೀವನ ಅಸ್ತವ್ಯಸ್ತವಾಗಿದ್ದು, ತಗ್ಗು ಪ್ರದೇಶಗಳು, ರಸ್ತೆಗಳು, ಗದ್ದೆ- ತೋಟಗಳು ಜಲಾವೃತವಾಗಿ ವಿವಿಧೆಡೆಗೆ ಸಂಪರ್ಕ ಕಡಿದು ಜಲದಿಗ್ಬಂಧನದಂತಹ ಪರಿಸ್ಥಿತಿ ಎದುರಾಗಿರುವ ಜತೆಗೆ ಅಲ್ಲಲ್ಲಿ ಗುಡ್ಡ, ಭೂಮಿ ಕುಸಿತ, ಮನೆಗಳ ಗೋಡೆ ಬಿದ್ದು, ಸಂಪರ್ಕ ಕಲ್ಪಿಸುವ ಹಲವು ರಸ್ತೆಗಳು ಬಂದ್ ಆಗಿ ಒಂದು ರೀತಿಯಲ್ಲಿ ಶೃಂಗೇರಿಗೆ ಜಲದಿಗ್ಬಂಧನವಾದಂತಾಗಿದೆ.