ಎನ್.ಆರ್.ಪುರ ಶ್ರೀ ಶಂಕರ ಭಾರತಿ ಸಭಾ ಭವನಕ್ಕೆ ದೇಣಿಗೆನರಸಿಂಹರಾಜಪುರ, ಶೃಂಗೇರಿ ಮಠದಿಂದ ಎನ್.ಆರ್.ಪುರ ಅಗ್ರಹಾರದ ಗಾಯಿತ್ರಿ ದೇವಿ ದೇವಸ್ಥಾನದ ಪಕ್ಕದಲ್ಲಿ ನೂತನವಾಗಿ ನಿರ್ಮಿಸಲಿರುವ ಶ್ರೀ ಶಂಕರ ಭಾರತೀ ಸಭಾ ಭವನಕ್ಕೆ ಶೃಂಗೇರಿ ಶಾರದಾ ಪೀಠದ ಜಗದ್ಗುರು ಶ್ರೀ ವಿಧುಶೇಖರ ಭಾರತಿ ಸ್ವಾಮೀಜಿಗಳು ಶೃಂಗೇರಿ ಗುರುಭವನದಲ್ಲಿ ₹7.50 ಲಕ್ಷ ರುಪಾಯಿಗಳ ಚೆಕ್ ನ್ನು ಶ್ರೀ ಶಂಕರ ಭಾರತಿ ಟ್ರಸ್ಟ್ ಅಧ್ಯಕ್ಷ ಎಂ.ಆರ್.ರವಿಶಂಕರ್ ಅವರಿಗೆ ಹಸ್ತಾಂತರಿಸಿದರು.