ಕಾಫಿ ನಾಡಿನಾದ್ಯಂತ ಗೌರಿ - ಗಣೇಶ ಹಬ್ಬದ ಸಂಭ್ರಮಚಿಕ್ಕಮಗಳೂರು, ಕಾಫಿಯ ನಾಡಿನಲ್ಲಿ ಗೌರಿ - ಗಣೇಶ ಹಬ್ಬಆಚರಿಸಲು ನಡೆಯುತ್ತಿರುವ ಭರದ ಸಿದ್ಧತೆಗಳೊಂದಿಗೆ ಗೌರಿ ಗಣೇಶ ಮೂರ್ತಿ ತಳಿರು, ತೋರಣ ಸೇರಿದಂತೆ ಪೂಜಾ ಸಾಮಗ್ರಿ ಖರೀದಿಗೆ ಹಳ್ಳಿಯ ಜನರು ಪೇಟೆಗಳತ್ತಾ ಮಂಗಳವಾರ ತೆರಳುತ್ತಿದ್ದರು. ಹಲವೆಡೆ ಒಂದು ದಿನದ ಮೊದಲೇ ಗಣೇಶ ಮೂರ್ತಿ ಖರೀದಿಸಿದ್ದರೆ, ಇನ್ನೂ ಕೆಲವೆಡೆ ಹಬ್ಬದಂದೆ ಖರೀದಿಸಲಾಗುತ್ತದೆ. ಒಟ್ಟಾರೆ ಹಬ್ಬದ ಸಂಭ್ರಮ ಎಲ್ಲಡೆ ಮನಮಾಡಿತ್ತು.