ನೊಬೆಲ್ ಬುಕ್ ಆಫ್ ರೆಕಾರ್ಡ್ ನಲ್ಲಿ ನಾಲ್ಕು ತಿಂಗಳ ಮಗುವಿನ ಹೆಸರು ಹೋಬಳಿಯ ಕಾಮಸಮುದ್ರ ಗ್ರಾಮದ ಶ್ರೀಮತಿ ದಾನೇಶ್ವರಿ ಮತ್ತು ರಾಮಾಂಜನೇಯ ದಂಪತಿಯ ನಾಲ್ಕು ತಿಂಗಳ ಮಗನಾದ ಯಶಶ್ವಿಕ್ ಅರ್ಜುನ್ ಆರ್. ಅಗಾಧ ಜ್ಞಾಪಕ ಶಕ್ತಿ ಹೊಂದಿದ್ದು ಎಲ್ಲರಿಗೂ ಅಚ್ಚರಿ ಮೂಡಿಸಿದೆ. ಈ ಮಗು ಪಕ್ಷಗಳು, ಬಣ್ಣಗಳು, ಅಕ್ಷರ, ಹಣ್ಣು, ತರಕಾರಿ, ವರ್ಣಮಾಲೆ ಆಕಾರಗಳು, 216 ಫ್ಲಾಶ್ ಕಾರ್ಡುಗಳನ್ನು ಗುರುತಿಸುವ ಮೂಲಕ ನೋಬೆಲ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ ನಲ್ಲಿ ತನ್ನ ದಾಖಲೆ ಬರೆಸಿದೆ.