ಜಾತಿ ಜನಗಣತಿಗೆ ಬಿಜೆಪಿ ವಿರೋಧಿಸಲ್ಲ: ಆರ್. ಅಶೋಕ್ಜಾತಿ ಜನಗಣತಿಯ ಬಿಜೆಪಿ ವಿರೋಧಿಸುವುದಿಲ್ಲ. ಆದರೆ ಜಾತಿಜನಗಣತಿ ವೈಜ್ಞಾನಿಕವಾಗಿ ಆಗಬೇಕೆಂಬುದೇ ನಮ್ಮ ನಿಲುವು ಎಂದು ವಿಪಕ್ಷ ನಾಯಕ ಆರ್. ಅಶೋಕ್ ಹೇಳಿದರು. ಶುಕ್ರವಾರ ಚಿತ್ರದುರ್ಗದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜಾತಿಗಣತಿಯನ್ನು ಕಾಂಗ್ರೆಸ್ ತಮ್ಮ ಹಿಂದಿನ ಅಧಿಕಾರ ಅವಧಿಯಲ್ಲಿ ಮಾಡಬಹುದಾಗಿತ್ತು. ಆಗ ಸುಮ್ಮನಿದ್ದು ಈಗ ಮುನ್ನಲೆಗೆ ತರುವ ಯತ್ನ ಮಾಡುತ್ತಿದೆ. ಜಾತಿ ಜನಗಣಿತಿಯ ಕಾಂಗ್ರೆಸ್ ನ ಒಕ್ಕಲಿಗ, ಲಿಂಗಾಯಿತ ಸಚಿವರೇ ವಿರೋಧಿಸಿದ್ದಾರೆ ಎಂದರು.