ಚಳ್ಳಕರೆ ನಗರದಲ್ಲಿ ನವರಾತ್ರಿ ಉತ್ಸವ ಸಂಪನ್ನಈ ಬಾರಿ ತಾಲೂಕಿನೆಲ್ಲೆಡೆ ಉತ್ತಮ ಮಳೆಯಾಗಿ ಹಸಿರಿನ ವಾತಾವರ ನಿರ್ಮಾಣವಾಗಿದ್ದು, ಚಳ್ಳಕರೆ ನಗರದಲ್ಲಿ ನವರಾತ್ರಿ ಉತ್ಸವಕ್ಕೆ ವಿಶೇಷ ಕಳೆಬಂದಿದೆ. ಭಕ್ತರು ಬನ್ನಿಮಂಟಪಕ್ಕೆ ಆಗಮಿಸಿ ಗ್ರಾಮ ದೇವರ ಸಮಾಗಮದಲ್ಲಿ ನಡೆದ ಬನ್ನಿ ಉತ್ಸವಕ್ಕೆ ಸಾಕ್ಷಿಯಾದರು. ಬನ್ನಿಮಂಟಪಕ್ಕೆ ಗ್ರಾಮ ದೇವ ಶ್ರೀ ವೀರಭದ್ರಸ್ವಾಮಿ, ಶ್ರೀ ಚಳ್ಳಕೆರೆಯಮ್ಮ, ಶ್ರೀ ಉಡಸಲಮ್ಮ ಆಗಮಿಸಿದ ಕೆಲವೇ ನಿಮಿಷಗಳಲ್ಲಿ ಮಳೆ ಆರಂಭವಾದರೂ ಕದಲದ ಜನ ದೇವರುಗಳಿಗೆ ಜೈಕಾರ ಹಾಕುತ್ತಲೇ ಮಳೆಯಲ್ಲೇ ಬನ್ನಿ ಮುಡಿಯುವ ಕ್ಷಣಕ್ಕಾಗಿ ಕಾತುರದಿಂದ ಕಾದರು.