ನಗರದ ರಸ್ತೆಬದಿಗಳಲ್ಲಿ ಗಣಪಣನ ದರ್ಬಾರುನಗರ ಸೇರಿದಂತೆ ತಾಲೂಕಿನಾದ್ಯಂತ ಶ್ರೀ ಗಣೇಶ ಚತುರ್ಥಿ ಹಬ್ಬವನ್ನು ಸಂಭ್ರಮ ಸಡಗರಗಳಿಂದ ಆಚರಿಸಲು ಸಿದ್ದತೆಗಳು ಭರದಿಂದ ಸಾಗಿವೆ. ಪ್ರಸ್ತುತ ವರ್ಷವೂ ಸಹ ರಾಜ್ಯದ ಬೇರೆ, ಬೇರೆ ಜಿಲ್ಲೆಗಳಿಂದ ವಿವಿಧ ಆಕೃತಿಯ, ಬಣ್ಣ, ಬಣ್ಣದ ಗಣೇಶನ ಮೂರ್ತಿಗಳು ನಗರದ ಪ್ರಮುಖ ರಸ್ತೆಗಳಲ್ಲಿ ರಾರಾಜಿಸುತ್ತಿದ್ದು, ಭಕ್ತರು ಗಣೇಶನ ಮೂರ್ತಿಯನ್ನು ಖರೀದಿಸಲು ಸಿದ್ಧತೆ ನಡೆಸಿದ್ದಾರೆ.