ಅಭಿವೃದ್ಧಿ ಯೋಜನೆ ಚರ್ಚೆ ಇಲ್ಲದೇ ಮುಗಿದ ಸಭೆಮೂರು ವರ್ಷಗಳ ನಂತರ ಮೊದಲ ಬಾರಿಗೆ ಸೋಮವಾರ ನಾಯಕನಹಟ್ಟಿ ಪಟ್ಟಣ ಪಂಚಾಯಿತಿ ಸಾಮಾನ್ಯಸಭೆ ನಡೆಯಿತು. ಅಭಿವೃದ್ಧಿ ಯೋಜನೆಗಳ ಬಗ್ಗೆ ಚರ್ಚೆ ಇಲ್ಲದೇ ಬರೀ ನಗರೋತ್ಥಾನ ಯೋಜನೆಯಡಿ ಬಿಡುಗಡೆಗೊಂಡಿದ್ದ ₹5 ಕೋಟಿ ಅನುದಾನ ಹಂಚಿಕೆ, ಕಾಮಗಾರಿಗಳ ಮರುಟೆಂಡರ್ ಪ್ರಕ್ರಿಯೆ ಸುತ್ತಲೇ ಗಿರಕಿ ಹೊಡೆಯಿತು.