ದೇಶಸೇವೆ ಎಂದರೆ ನೊಂದವರ ಸೇವೆಎಲ್ಲಿಯವರೆಗೆ ಬಡವರು ಕಣ್ಣೀರಿನಿಂದ ಬಳಲುತ್ತಾರೋ ಅಲ್ಲಿಯವರೆಗೆ ಸ್ವಾತಂತ್ರ್ಯಕ್ಕೆ ಬೆಲೆ ಇರಲಾರದು. ದೇಶಸೇವೆ ಎಂದರೆ ನೊಂದವರ ಸೇವೆಯೇ ಆಗಿದೆ ಎಂಬ ನೆಹರೂಜಿ ಮಾತು ಅಕ್ಷರಶಃ ಸತ್ಯ ಎಂದು ತಹಸೀಲ್ದಾರ್ ರಾಜೇಶ್ ಕುಮಾರ್ ಹೇಳಿದರು. ನಗರದ ನೆಹರೂ ಮೈದಾನದಲ್ಲಿ ಗುರುವಾರ ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ವತಿಯಿಂದ ನಡೆದ 78 ನೇ ಸ್ವಾತಂತ್ರ್ಯ ದಿನಾಚರಣೆ ಕಾರ್ಯಕ್ರಮದಲ್ಲಿ ಧ್ವಜಾರೋಹಣ ನೆರವೇರಿಸಿ ಮಾತನಾಡಿದರು.