ದಂಪತಿಯನ್ನು ಕಟ್ಟಿಹಾಕಿ ಚಿನ್ನಾಭರಣ, ನಗದು ದೋಚಿದ ಕಳ್ಳರುಪಟ್ಟಣದ ಬೆಂಗಳೂರು ರಸ್ತೆಯ ಸಣ್ಣಲಿಂಗಪ್ಪ ಬಡಾವಣೆ ಮನೆಯೊಂದಕ್ಕೆ ಹಿಂಬಾಗಿಲಿನಿಂದ ನುಗ್ಗಿದ ಮೂವರು ಕಳ್ಳರು ಶಿಕ್ಷಕ ಬಿ.ಈರಣ್ಣ (೫೪), ಪತ್ನಿ ರಾಧ (೪೭) ದಂಪತಿ ಮೇಲೆ ಹಲ್ಲೆ ನಡೆಸಿ, ಜೀವ ಬೆದರಿಕೆಯೊಡ್ಡಿ, ಮನೆಯಲ್ಲಿದ್ದ ಚಿನ್ನಾಭರಣ, ನಗದು ದೋಚಿರುವ ಘಟನೆ ಶನಿವಾರ ರಾತ್ರಿ ೧೧.೩೦ರ ಸಮಯದಲ್ಲಿ ನಡೆದಿದೆ.