ಸವಲತ್ತುಗಳನ್ನು ಪಡೆಯುವಲ್ಲಿ ರೈತ ಸಂಘ ಯಶಸ್ವಿ: ಸೋಮಗುದ್ದುರಂಗಸ್ವಾಮಿಸುಮಾರು ೪೦ ವರ್ಷಗಳಿಂದ ತಾಲೂಕಿನಾದ್ಯಂತ ರೈತರನ್ನು ಜಾಗೃತಿಗೊಳಿಸಿ ಹೋರಾಟದ ಮೂಲಕ ಸವಲತ್ತುಗಳನ್ನು ಪಡೆಯುವಲ್ಲಿ ನಮ್ಮ ರೈತ ಸಂಘ ಯಶಸ್ವಿಯಾಗಿದೆ. ಇದರಿಂದ ಸಾವಿರಾರು ರೈತರಿಗೆ ನೆರವು ಸಿಕ್ಕಿದೆ. ಆದರೆ ಇತ್ತೀಚಿನ ದಿನಗಳಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ರೈತರ ಸಮಸ್ಯೆಗಳ ಬಗ್ಗೆ ಧೋರಣೆ ತಾಳಿರುವುದು ನೋವಿನ ಸಂಗತಿ ಎಂದು ಅಖಂಡ ಕರ್ನಾಟಕ ರೈತ ಸಂಘದ ಸಂಸ್ಥಾಪಕ ಅಧ್ಯಕ್ಷ ಸೋಮಗುದ್ದುರಂಗಸ್ವಾಮಿ ತಿಳಿಸಿದರು.