ಪರಶುರಾಂಪುರದಲ್ಲಿ ಕೆಲ ದಿನಗಳಿಂದ ಬೈಕ್ ಕಳ್ಳತನಪರಶುರಾಂಪುರದಲ್ಲಿ ದಿನದಿಂದ ದಿನಕ್ಕೆ ಬೈಕ್ ಕಳ್ಳತನದ ಪ್ರಕರಣಗಳು ಹೆಚ್ಚಾಗಿದೆ. ಈ ಭಾಗದ ಮುಖ್ಯ ವೃತ್ತಗಳಲ್ಲಿ, ಬ್ಯಾಂಕ್ ಆವರಣದಲ್ಲಿ, ಮನೆಗಳ ಮುಂದೆ ಸರ್ಕಾರಿ ಸಮುದಾಯ ಆರೋಗ್ಯ ಕೇಂದ್ರದ ಆವರಣಗಳಲ್ಲಿ ಹಾಗೂ ರಾಜ ಬೀದಿಗಳಲ್ಲಿ ಪಾದಾಚಾರಿ ರಸ್ತೆಗಳಲ್ಲಿ ನಿಲ್ಲಿಸಿದ ಬೈಕ್ ಗಳನ್ನು ಕ್ಷಣಾರ್ಧದಲ್ಲಿ ಎಸ್ಕೇಪ್ ಮಾಡುತ್ತಿರುವ ಪ್ರಕರಣ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು ಬೈಕ್ ಸವಾರರು ಮತ್ತು ಸ್ಥಳೀಯರು ಭಯ ಭೀತರಾಗಿದ್ದಾರೆ.