ಪ್ರತಿಭೆ ಗುರುತಿಸುವಲ್ಲಿ ತಾರತಮ್ಯ ನೀತಿ ಸಲ್ಲ ಪ್ರತಿಭೆ ಗುರುತಿಸುವಲ್ಲಿ ತಾರತಮ್ಯ ನೀತಿ ಅನಸರಿಸುವುದು, ಪೂರ್ವಗ್ರಹಿಯಾಗಿ ನಡೆದುಕೊಳ್ಳುವುದು ಸರಿಯಲ್ಲವೆಂದು ರಾಜ್ಯ ವಕ್ಫ್ ಮಂಡಳಿ ಅಧ್ಯಕ್ಷ ಕೆ.ಅನ್ವರ್ ಭಾಷಾ ಹೇಳಿದರು.ಎಲ್ಲಾ ಮಕ್ಕಳಲ್ಲಿಯೂ ಪ್ರತಿಭೆ ಹಾಗೂ ಕ್ರಿಯಾಶೀಲತೆ ಇರುತ್ತದೆ. ಅಂತಹ ಪ್ರತಿಭೆಯನ್ನು ಶಿಕ್ಷಕರು ಹಾಗೂ ಪೋಷಕರು ಗುರುತಿಸಿ, ಕಲೆ ಅನಾವರಣಗೊಳಿಸಲು ಪ್ರೋತ್ಸಾಹ ನೀಡಬೇಕು ಎಂದರು.