ಬೆಂಗಳೂರು ಐಟಿ ಹಬ್ ಮಾದರಿಯಲ್ಲಿ ಮಂಗಳೂರಲ್ಲಿ ‘ಸಿಲಿಕಾನ್ ಬೀಚ್’ ಅಭಿವೃದ್ಧಿದ.ಕ. ಸಂಸದ ಕ್ಯಾ.ಬ್ರಿಜೇಶ್ ಚೌಟ ಅವರ ‘ಬ್ಯಾಕ್ ಟು ಊರು’ ಪರಿಕಲ್ಪನೆಯಡಿ ದೇಶ, ಹೊರ ದೇಶಗಳಲ್ಲಿರುವ ಮಂಗಳೂರಿಗರನ್ನು ಮರಳಿ ಇಲ್ಲಿಗೆ ಆಹ್ವಾನಿಸಿ ಸಾಫ್ಟ್‌ವೇರ್ ಉದ್ದಿಮೆಯನ್ನು ಸ್ಥಾಪಿಸುವಂತೆ ಪ್ರೇರೇಪಿಸಲು ಈ ವೇದಿಕೆ ಕಲ್ಪಿಸಲಾಗಿದೆ. ಈ ಹಿಂದೆ ‘ಬೊಳ್ಪು’ ಎಂಬ ಕಾರ್ಯಕ್ರಮ ಸಂಘಟಿಸಿ ಪರವೂರಿನಲ್ಲಿರುವ ಊರಿನವರಿಗೆ ಊರಿನಲ್ಲೇ ಉದ್ದಿಮೆ ಸ್ಥಾಪಿಸಲು ಅವಕಾಶ ಕಲ್ಪಿಸಲಾಗಿತ್ತು, ಇದೀಗ ‘ಸಿಲಿಕಾನ್ ಬೀಚ್’ ವೇದಿಕೆಯಡಿ ಸಾಫ್ಟ್‌ವೇರ್ ಕಂಪನಿಗಳ ಸ್ಥಾಪನೆಗೆ ಮುಕ್ತ ಅವಕಾಶ ನೀಡಲಾಗಿದೆ.