ಕಟೀಲು ಜಾತ್ರೋತ್ಸವ: ಹಗಲು ರಥೋತ್ಸವ ಸಂಪನ್ನಬೆಳಗ್ಗೆ ಪ್ರಾರ್ಥನೆಯಾಗಿ ದೇವರು ಹೊರಟು, ರಥ ಬಲಿಯಾಗಿ ರಥರೋಹಣ ನಡೆದು, ರಥ ಹೂವಿನ ಪೂಜೆಯಾಗಿ ರಥೋತ್ಸವ ನೆರವೇರಿತು. ಬಳಿಕ ಮೂರು ಕಡೆಯಲ್ಲಿ ಕಟ್ಟೆಪೂಜೆ, ದರ್ಶನಬಲಿ (ಓಡಬಲಿ), ಭೋಜನ ಶಾಲೆಗೆ ಪ್ರಸಾದ ಹಾಕಿ, ಮಧ್ಯಾಹ್ನ ಅನ್ನಪ್ರಸಾದ, ಸಂಜೆ ಬಲಿ ಹೊರಟು ದೊಡ್ಡ ಅಜಕಾಯಿ, ರಾತ್ರಿ ಚಿನ್ನದ ರಥ ಉತ್ಸವ, ಚಿನ್ನದ ಪಲ್ಲಕಿ ಉತ್ಸವ, ವಸಂತಮಂಟಪ ಪೂಜೆ, ಅಷ್ಟಾವಧಾನ, ರಾತ್ರಿ ಪೂಜೆ, ಅಭಿಷೇಕ, ಶಯನ ಅಲಂಕಾರ, ಮಧ್ಯರಾತ್ರಿ ಶ್ರೀಭೂತ ಬಲಿ, ಶಯನ, ಕವಾಟ ಬಂಧನ ನೆರವೇರಿತು.