ಕೆಪಿಟಿ ಸಂಸ್ಥೆಗೆ ಎಡಿಬಿ ನಿಯೋಗ ಭೇಟಿ, ಉತ್ಕೃಷ್ಟತಾ ಕೇಂದ್ರ ಸ್ಥಾಪನೆಗೆ ಪರಿಶೀಲನೆಭೇಟಿಯ ಸಂದರ್ಭ ಸಂಸ್ಥೆಯ ಅಧಿಕಾರಿಗಳು ಮೂಲ ಸೌಕರ್ಯ ಹಾಗೂ ಉತ್ಕೃಷ್ಠತಾ ಕೇಂದ್ರದ ಸ್ಥಾಪನೆಗೆ ಸಂಬಂಧಿಸಿದ ಸಿದ್ಧತೆಗಳ ವರದಿಯನ್ನು ಮಂಡಿಸಿದರು. ಬಳಿಕ ನಿಯೋಗವು ಕ್ಯಾಂಪಸ್ ಭೇಟಿ, ಕಟ್ಟಡ ಮತ್ತು ಸ್ಥಳ ಪರಿಶೀಲನೆ ಹಾಗೂ ಸಹಭಾಗಿತ್ವದ ಅಂಗವಾಗಿ ವಿವಿಧ ವಲಯಗಳ ಉದ್ಯಮಿಗಳು, ಸಂಸ್ಥೆಯ ಹಳೆ ವಿದ್ಯಾರ್ಥಿಗಳು, ಪೋಷಕರು, ಸಮೀಪದ ತಾಂತ್ರಿಕ ಸಂಸ್ಥೆಯ ಪ್ರತಿನಿಧಿಗಳು ಹಾಗೂ ವಿದ್ಯಾರ್ಥಿಗಳೊಂದಿಗೆ ಸಂವಾದ ಹಮ್ಮಿಕೊಂಡಿತ್ತು.