ವಿದ್ಯಾರ್ಥಿಗಳ ಜನಿವಾರ ಕತ್ತರಿಸಿದ ಕೃತ್ಯ ಅಮಾನವೀಯ: ಡಾ. ಭರತ್ ಶೆಟ್ಟಿರಾಜ್ಯದಲ್ಲಿ ಅಸ್ತಿತ್ವಕ್ಕೆ ಬಂದ ಕಾಂಗ್ರೆಸ್ ಸರ್ಕಾರ ಹಿಂದುಗಳನ್ನು ಗಮನಿಸಲು, ಅವರನ್ನು ಅವಮಾನಿಸಲು ಎಲ್ಲಾ ಕಡೆ ಪ್ರಯತ್ನಿಸುತ್ತಲೇ ಇದೆ. ಹಿಂದೂಪರ ಹೋರಾಟಗಾರರಿಗೆ, ಶಾಸಕರ ಮೇಲೆ ಕೇಸಿನ ಮೇಲೆ ಕೇಸು ಹಾಕುವ ಈ ಸರ್ಕಾರ ಇದೀಗ ಬ್ರಾಹ್ಮಣರ ಜನಿವಾರ ಕತ್ತರಿಸುವ ಮೂಲಕ ಬ್ರಾಹ್ಮಣರ ಶಾಪಕ್ಕೆ ಗುರಿಯಾಗಿದೆ ಎಂದು ಮಂಗಳೂರು ಉತ್ತರ ಶಾಸಕ ಡಾ. ಭರತ್ ಶೆಟ್ಟಿ ಹೇಳಿದ್ದಾರೆ.