ಆಡಿ ನಲಿದು ಸಂಭ್ರಮಿಸಿದ ವಾತ್ಸಲ್ಯ ವಂಚಿತ ಮಕ್ಕಳುಚಿಣ್ಣರ ಉತ್ಸವದಲ್ಲಿ 10 ಅನಾಥಾಶ್ರಮಗಳ ಸುಮಾರು 450ಕ್ಕೂ ಅಧಿಕ ವಿದ್ಯಾರ್ಥಿಗಳು ವಿವಿಧ ಆಟೋಟ ಸ್ಪರ್ಧೆಗಳಲ್ಲಿ ಭಾಗವಹಿಸಿದರು. ಕ್ರೀಡಾ ಸ್ಪರ್ಧೆಗಳೊಂದಿಗೆ ಆರಂಭಗೊಂಡ ಉತ್ಸವ ಬಳಿಕ ಗಾನ, ನೃತ್ಯ, ನಾಟಕ ಸಹಿತ ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಮುಕ್ತಾಯಗೊಂಡಿತು. ಮಕ್ಕಳ ಸಂಭ್ರಮ ಮುಗಿಲು ಮುಟ್ಟಿತ್ತು.