ಮೂಡುಬಿದಿರೆ: ಲಾಡಿ ಬ್ರಹ್ಮ ದೇವಸ್ಥಾನ ಬ್ರಹ್ಮಕಲಶೋತ್ಸವ ಲಾಡಿ ಶ್ರೀ ಚತುರ್ಮುಖ ಬ್ರಹ್ಮ ದೇವಸ್ಥಾನದಲ್ಲಿ ಫೆ 12ರಿಂದ 16ರವರೆಗೆ ನಡೆಯಲಿರುವ ಬ್ರಹ್ಮಕಲಶೋತ್ಸವದ ಅಂಗವಾಗಿ ಭಜಕರು, ಆಸುಪಾಸಿನ ಗ್ರಾಮಸ್ಥರು, ಊರ ಪರವೂರ ಭಕ್ತಾದಿಗಳು ಸಂಘ ಸಂಸ್ಥೆಗಳ ವತಿಯಿಂದ ಭರ್ಜರಿ ಹೊರೆಕಾಣಿಕೆಯನ್ನು ಮೆರವಣಿಗೆಯಲ್ಲಿ ಭಾನುವಾರ ಪೇಟೆಯ ಮುಖ್ಯ ರಸ್ತೆಯಲ್ಲಿ ಕೊಂಡೊಯ್ದು ದೇವಳಕ್ಕೆ ತಲುಪಿಸಲಾಯಿತು.