ಕಿನ್ನಿಗೋಳಿ ಅನಂತ ಪ್ರಕಾಶ ಪುರಸ್ಕಾರ ಪ್ರದಾನ, ಕೃತಿಗಳ ಬಿಡುಗಡೆಕಿನ್ನಿಗೋಳಿಯ ನೇಕಾರಸೌಧ ಸಭಾಭವನದಲ್ಲಿ ಕಿನ್ನಿಗೋಳಿಯ ಅನಂತ ಪ್ರಕಾಶ ಮಾಸಪತ್ರಿಕೆ - ಪ್ರಕಾಶನ - ಮುದ್ರಣಾಲಯ ಸಂಸ್ಥೆಯ 29ನೇ ವರ್ಷಾಚರಣೆಯ ಸಂಭ್ರಮ ಸಮಾರಂಭ ನಡೆಯಿತು. ಸಾಹಿತಿ, ವಿದ್ವಾಂಸ ಕೆ.ಎಲ್.ಕುಂಡಂತಾಯ ಅವರಿಗೆ 10 ಸಾವಿರ ರು. ನಗದು, ಅಭಿನಂದನಾ ಕೃತಿ ಸಮರ್ಪಣೆ ಸಹಿತ ಅನಂತ ಪ್ರಕಾಶ ಪುರಸ್ಕಾರ ಪ್ರದಾನ ಮಾಡಲಾಯಿತು.