ಸರ್ಕಾರದ ಸೌಲಭ್ಯ ಪಡೆದು ಆರ್ಥಿಕವಾಗಿ ಸಬಲರಾಗಬೇಕು: ಶಾಸಕ ರಾಜೇಶ್ ನಾಯ್ಕ್ಕಾರ್ಮಿಕ ಇಲಾಖೆಯ ಮೂಲಕ ಬಂಟ್ವಾಳ ಕ್ಷೇತ್ರದಲ್ಲಿ ಪ್ರಸ್ತುತ ೩೧೮ ಮಂದಿ ಮೇಸ್ತ್ರಿಗಳಿಗೆ ಕಿಟ್, ೧೦೧ ಮಂದಿ ವೆಲ್ಡರ್‌ಗಳಿಗೆ ಕಿಟ್ ಹಾಗೂ ೬೩ ಮಂದಿ ಎಲೆಕ್ಟ್ರೀಷಿಯನ್‌ಗಳಿಗೆ ಸೇರಿ ಒಟ್ಟು ೪೮೨ ಮಂದಿಗೆ ಕಿಟ್ ಮಂಜೂರಾಗಿದ್ದು, ಫಲಾನುಭವಿಗಳಿಗೆ ಸಾಂಕೇತಿಕವಾಗಿ ಕಿಟ್ ವಿತರಿಸಲಾಯಿತು. ಜತೆಗೆ ೩೬ ಮಂದಿ ಮಹಿಳಾ ಫಲಾನುಭವಿಗಳಿಗೆ ಹೊಲಿಗೆ ಯಂತ್ರ ನೀಡಲಾಯಿತು.