ಕದ್ರಿ ಕ್ಷೇತ್ರದಲ್ಲಿ ಪುಟಾಣಿ ಕೃಷ್ಣರ ಕಲರವ!ಮುದ್ದು ಕೃಷ್ಣ, ಕಂದ ಕೃಷ್ಣ, ಕಿಶೋರ ಕೃಷ್ಣ, ತುಂಟ ಕೃಷ್ಣ.. ಹೀಗೆ ಕೃಷ್ಣನ ವಿವಿಧ ‘ಅವತಾರ’ಗಳಿಗೆ ಕದ್ರಿ ಕ್ಷೇತ್ರ ಸಾಕ್ಷಿಯಾಯಿತು. ದೇವಾಲಯ ಆವರಣದ ವಿವಿಧೆಡೆ 42 ವಿಭಾಗಗಳಲ್ಲಿ ಕೃಷ್ಣ ವೇಷ ಸ್ಪರ್ಧೆ ನೋಡುಗರ ಮನಸೂರೆಗೊಳಿತು. ಊರು- ಪರವೂರುಗಳಿಂದ ಜನರು ತಮ್ಮ ‘ಮುದ್ದು ಕೃಷ್ಣ’ರೊಂದಿಗೆ ಆಗಮಿಸಿದ್ದರು.