ಮೂಡುಬಿದಿರೆ: 30ನೇ ವರ್ಷದ ಆಳ್ವಾಸ್ ವಿರಾಸತ್‌ಗೆ ವಿದ್ಯಾಗಿರಿ ಸಜ್ಜುರಾಷ್ಟ್ರೀಯ ಸಾಂಸ್ಕೃತಿಕ ಉತ್ಸವವಾದ ೩೦ನೇ ವರ್ಷದ ‘ಆಳ್ವಾಸ್ ವಿರಾಸತ್’ಗೆ ವಿದ್ಯಾಗಿರಿಯು ವಿದ್ಯುದ್ದೀಪಾಲಂಕಾರ, ಹೂ-ಹಣ್ಣಿನ ಸಿಂಗಾರ, ಗೂಡುದೀಪಗಳ ಬೆಳಕು, ಕಲಾಕೃತಿಗಳ ಮೆರುಗು ಸೇರಿದಂತೆ ಅನನ್ಯತೆ ಹಾಗೂ ಅಚ್ಚರಿಗಳ ಬೆರಗಿನ ಮೂಲಕ ಸಜ್ಜಾಗಿದೆ. ಮಂಗಳವಾರದಿಂದ (ಡಿ.10) ಭಾನುವಾರದ ವರೆಗೆ (ಡಿ.೧೫) ಕಾರ್ಯಕ್ರಮ ನಡೆಯಲಿವೆ.