ಹಳೆ ಡಿಸಿ ಕಚೇರಿ ಪಾರಂಪರಿಕ ಉತ್ಸವ ಇಂದಿಗೆ ವಿಸ್ತರಣೆಪ್ರವಾಸೋದ್ಯಮ ಅಭಿವೃದ್ಧಿ ದೃಷ್ಟಿಯಿಂದ ಈ ಹಳೆ ಕಟ್ಟಡವನ್ನೇ ಕೇಂದ್ರೀಕರಿಸಿ ಇದೇ ಮೊದಲ ಬಾರಿಗೆ ಪಾರಂಪರಿಕ ಉತ್ಸವ ಆಯೋಜಿಸಲಾಗಿದೆ. ಇದರಲ್ಲಿ ಕರಾವಳಿಯ ಸೊಗಡು, ಕಲೆ, ಸಂಸ್ಕೃತಿ, ಇತಿಹಾಸವನ್ನು ಬಿಂಬಿಸುವ ಕಲಾಕೃತಿಗಳು, ಅಪರೂಪದ ಫೋಟೊಗಳು ಇತ್ಯಾದಿಗಳನ್ನು ಪ್ರದರ್ಶನಕ್ಕೆ ಇರಿಸಲಾಗಿದೆ.