ದೊಡ್ಡಣಗುಡ್ಡೆ: ಪಂಚಮುಖಿ ಗಾಯತ್ರಿ ದೇವಿಯ ದೃಢಕಲಶೋತ್ಸವ ಸಂಪನ್ನಪ್ರಾತಃಕಾಲ ತ್ರಿನಾಳಿಕೇರ ಗಣಯಾಗ, ಪ್ರಧಾನಯಾಗ ಹಾಗೂ ಒದಗಿದ ಸುಮುಹೂರ್ತದಲ್ಲಿ ಬ್ರಹ್ಮಕಲಶಾಭಿಷೇಕವನ್ನು ವೇದಮೂರ್ತಿ ಸರ್ವೇಶ ತಂತ್ರಿ ಸಂಪನ್ನಗೊಳಿಸಿದರು. ನಂತರ ನ್ಯಾಸ ಪೂಜೆ, ಬ್ರಾಹ್ಮಣ ಸುವಾಸಿನಿ ಆರಾಧನೆ, ಪ್ರಸನ್ನ ಪೂಜೆ, ಮಹಾಪೂಜೆ ಹಾಗೂ ಮಹಾ ಅನ್ನಸಂತರ್ಪಣೆ ನೆರವೇರಿತು.