ಬೆಳ್ತಂಗಡಿ: ಪಶು ಇಲಾಖೆ 80 ಹುದ್ದೆಗಳ ಪೈಕಿ 70 ಖಾಲಿ!ಬೆಳ್ತಂಗಡಿ ತಾಲೂಕಿನಲ್ಲಿ ಈ ಹಿಂದಿನ ಜಾನುವಾರು ಗಣತಿ ಪ್ರಕಾರ 67,119 ಹಸು, 492 ಎಮ್ಮೆ, 550 ಹಂದಿ, 17 ಕುರಿ, 3,064 ಆಡುಗಳು ಸೇರಿ 71,242 ಜಾನುವಾರುಗಳಿವೆ. 3 ಪಶು ಆಸ್ಪತ್ರೆ, 9 ಪಶು ಚಿಕಿತ್ಸಾಲಯ, 8 ಪ್ರಾಥಮಿಕ ಪಶು ಚಿಕಿತ್ಸಾ ಕೇಂದ್ರಗಳು ಕಾರ್ಯನಿರ್ವಹಿಸುತ್ತಿವೆ. ಎಲ್ಲಾ ಕಡೆ ಸಿಬ್ಬಂದಿ ಕೊರತೆ ಇದೆ.