ಅಖಿಲ ಭಾರತ ಅಂತರ್ ವಿವಿ ಅಥ್ಲೆಟಿಕ್ಸ್: ಮಂಗಳೂರು ವಿ.ವಿ. ಚಾಂಪಿಯನ್ಮಂಗಳೂರು ವಿವಿ ಎರಡು ವಿಭಾಗಗಳಲ್ಲಿ ಒಟ್ಟು ೪ ಚಿನ್ನ, ೩ ಬೆಳ್ಳಿ, ೭ ಕಂಚಿನ ಪದಕ ಪಡೆದುಕೊಂಡಿತು. ಪದಕ ಪಡೆದ ಎಲ್ಲಾ ವಿದ್ಯಾರ್ಥಿಗಳು ಆಳ್ವಾಸ್ ಕಾಲೇಜಿನ ವಿದ್ಯಾರ್ಥಿಗಳು. ಪುರುಷ ಹಾಗೂ ಮಹಿಳೆಯರ ಮಂಗಳೂರು ವಿವಿ ತಂಡದ ಒಟ್ಟು ೭೨ ಜನರ ಆಟಗಾರರಲ್ಲಿ ೫೯ ಕ್ರೀಡಾಪಟುಗಳು ಆಳ್ವಾಸ್ನ ವಿದ್ಯಾರ್ಥಿಗಳಾಗಿದ್ದರು.