ಅಶಕ್ತರಿಗೆ ಸೂರು ನೆರವಿಗೆ ರಾಮರಾಜ್ಯ ಸಮಿತಿ ಅಸ್ತಿತ್ವಕ್ಕೆ: ಪೇಜಾವರಶ್ರೀಉಡುಪಿಯಲ್ಲಿ ನಾವು ಈಗಾಗಲೇ ಬಡವರಿಗೆ ಮನೆ ನಿರ್ಮಿಸುವುದನ್ನು ಕಾರ್ಯಗತಗೊಳಿಸುತ್ತಿದ್ದೇವೆ. ಇದೇ ಮಾದರಿಯನ್ನು ರಾಮರಾಜ್ಯ ಸಮಿತಿ ಹೆಸರಿನಲ್ಲಿ ಎಲ್ಲ ಕಡೆಗಳಿಗೂ ವಿಸ್ತರಿಸಲಾಗುವುದು. ಯಾರು ಬೇಕಾದರೂ ಯಾರಿಗೂ ಸಹಾಯ ಮಾಡಬಹುದು. ದೇಶ ಭಕ್ತಿ, ರಾಮಭಕ್ತಿ ಬೇರೆ ಅಲ್ಲ ಎಂಬುದನ್ನು ಈ ಸೇವಾ ಕಾರ್ಯ ತೋರಿಸಿಕೊಡಲಿದೆ ಎಂದು ಮಂಗಳೂರಿನಲ್ಲಿ ಶುಕ್ರವಾರ ಪೇಜಾವರ ಶ್ರೀಗಳು ವಿವರಿಸಿದರು.