ಇರುಳ ಬೆಳಗಿಸಿದ ಮಂಗಳೂರು ದಸರಾ ಶೋಭಾಯಾತ್ರೆನವದುರ್ಗೆಯರು, ಶಾರದೆ, ಆದಿಶಕ್ತಿ, ಗಣಪತಿ, ನಾರಾಯಣ ಗುರುಗಳ ವಿಗ್ರಹಗಳ ಜತೆಗೆ 70ಕ್ಕೂ ಅಧಿಕ ವೈವಿಧ್ಯಮಯ ಟ್ಯಾಬ್ಲೊಗಳ ಮೆರವಣಿಗೆಗೆ ಜಾತಿ ಧರ್ಮ ಭೇದವಿಲ್ಲದೆ ದೇಶ- ವಿದೇಶಗಳೆಲ್ಲೆಡೆಯ ಲಕ್ಷಾಂತರ ಮಂದಿ ಸಾಕ್ಷಿಯಾದರು. ಕುದ್ರೋಳಿ ದೇವಾಲಯದ ಅಭಿವೃದ್ಧಿ ರೂವಾರಿ, ಮಾಜಿ ಕೇಂದ್ರ ಸಚಿವ ಜನಾರ್ದನ ಪೂಜಾರಿ ನೇತೃತ್ವದಲ್ಲಿ ಈ ಬಾರಿಯೂ ದಸರಾ ಮಹೋತ್ಸವ ಜನರ ಮನದಂಗಳಕ್ಕಿಳಿದು ಸಂಪನ್ನಗೊಂಡಿತು.