ಪಣೋಲಿಬೈಲು ಕ್ಷೇತ್ರದ ಹರಕೆ ಕೋಲದಲ್ಲಿ ಸ್ಪೀಕರ್ ಖಾದರ್ ಭಾಗಿಹರಕೆ ಕೋಲದ ಫೊಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದು, ಖಾದರ್ ಅವರೇ ಹೇಳಿಕೊಂಡಿದ್ದ ಹರಕೆ ಎಂದು ತಪ್ಪು ಸಂದೇಶ ರವಾನೆಯಾಗುತ್ತಿದೆ, ಜೊತೆಗೆ ಮುಸ್ಲಿಂ ನಾಯಕರಿಂದ ಖಾದರ್ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ಆಕ್ಷೇಪಗಳು ವ್ಯಕ್ತವಾಗಿದೆ. ಆದರೆ ಇದೆಲ್ಲ ಸತ್ಯಕ್ಕೆ ದೂರವಾಗಿದ್ದು, ನಾನು ಮನಸ್ಸಿನಲ್ಲಿ ಹೇಳಿಕೊಂಡಿದ್ದ ಹರಕೆಯನ್ನು ಈಡೇರಿಸಿದ್ದಕ್ಕೆ ವೈಯಕ್ತಿಕ ನೆಲೆಯಲ್ಲಿ ಪಣೋಲಿಬೈಲಿನಲ್ಲಿ ಹರಕೆ ಕೋಲ ನೆರವೇರಿಸಿದ್ದೇನೆ ಎಂದು ಮುಡಿಪು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕಾಜವ ತಿಳಿಸಿದ್ದಾರೆ.