ಭಾರತ ಸಂವಿಧಾನ ವಿಶ್ವದಲ್ಲಿಯೇ ಶ್ರೇಷ್ಠ: ಜುಬಿನ್ ಮೊಹಾಪಾತ್ರಕೊಂಬೆಟ್ಟಿನ ಪುತ್ತೂರು ತಾಲೂಕು ಕ್ರೀಡಾಂಗಣದಲ್ಲಿ ನಡೆದ ೭೫ನೇ ಗಣರಾಜ್ಯೋತ್ಸವ ಕಾರ್ಯಕ್ರಮ ಶುಕ್ರವಾರ ಮುಂಜಾನೆ ನಡೆಯಿತು. ಈ ಸಂದರ್ಭ ಕ್ರೀಡಾ ಸಾಧಕ ವಿದ್ಯಾರ್ಥಿಗಳಾದ ಕೀರ್ತಿ, ಸಿಂಚನಾ, ದನ್ವಿತ್, ಸ್ವೀಕೃತ್ ಆನಂದ್ ತ್ರಿಶೂಲ್ ಗೌಡ ಅವರನ್ನು ಸನ್ಮಾನಿಸಲಾಯಿತು. ಅತ್ಯುತ್ತಮ ಪಥಸಂಚಲನ ನಿರೂಪಿಸಿದ ಪೊಲೀಸ್ ಇಲಾಖೆ (ಪ್ರಥಮ), ಸಂತ ಫಿಲೋಮಿನಾ ಎನ್‌ಸಿಸಿ ಕೆಡೆಟ್ (ಧ್ವಿತೀಯ) ಹಾಗೂ ವಿವೇಕಾನಂದ ಪ್ರಥಮದರ್ಜೆ ಕಾಲೇಜು ಎನ್ ಸಿಸಿ ತೃತೀಯ ಬಹುಮಾನ ಪಡೆದುಕೊಂಡವು.