ಎಡಮಂಗಲದಲ್ಲಿ ಮರುಕಳಿಸಿದ ‘ಕಾಂತಾರ’ ಸನ್ನಿವೇಶಕಳೆದ ವರ್ಷ ದೈವ ನರ್ತನದ ವೇಳೆಯೇ ಕುಸಿದು ಬಿದ್ದು ಮೃತಪಟ್ಟಿದ್ದ ಕಾಂತು ಅಜಿಲರ ಮಕ್ಕಳನ್ನೇ ಮುಂದಿನ ದೈವನರ್ತಕರಾಗಿಸಬೇಕೆಂಬ ದೈವದ ಅಭಯಕ್ಕೆ ಜನ ತಲೆ ಬಾಗಿದ್ದು, ಶಿರಾಡಿ ದೈವ ನರ್ತನದ ಜವಾಬ್ದಾರಿಯ ದೀಕ್ಷೆ ಬೂಳ್ಯವನ್ನು ಕಾಂತು ಅಜಿಲರ ಪುತ್ರ ಮೋನಪ್ಪ ಮೂಲಂಗೇರಿ ಪಡೆದಿದ್ದಾರೆ.