ರಾಜ್ಯ ಬಿಜೆಪಿಯಿಂದ 1.5 ಕೋಟಿ ಸದಸ್ಯತ್ವ ಗುರಿರಾಜ್ಯದಲ್ಲಿ ಕನಿಷ್ಠ 1.5 ಕೋಟಿ ಸದಸ್ಯತ್ವ ನೋಂದಣಿ ಗುರಿಯೊಂದಿಗೆ ಮಂಡಲ, ತಾಲೂಕು, ಜಿಲ್ಲಾ ಮಟ್ಟದಲ್ಲಿ ಬಿಜೆಪಿ ಸದಸ್ಯತ್ವ ಅಭಿಯಾನ ಕೈಗೊಳ್ಳಲಾಗಿದೆ. ನಮ್ಮೆಲ್ಲಾ ಮುಖಂಡರು, ಪದಾಧಿಕಾರಿಗಳು, ಕಾರ್ಯಕರ್ತರು ಅಭಿಯಾನ ಯಶಸ್ವಿಗೊಳಿಸಬೇಕು ಎಂದು ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ, ಸದಸ್ಯತ್ವ ಅಭಿಯಾನ ಸಂಚಾಲಕ ನಂದೀಶ ರೆಡ್ಡಿ ದಾವಣಗೆರೆಯಲ್ಲಿ ಹೇಳಿದ್ದಾರೆ.