ಆಣೆ, ಪ್ರಮಾಣಕ್ಕೆ ಸಿದ್ಧ, ವಿಧಾನಸಭೆ ಬಗ್ಗೆ ನೀವೂ ಬನ್ನಿ!ಲೋಕಸಭೆ ಚುನಾವಣೆಗೆ ಬಿಜೆಪಿ ಅಭ್ಯರ್ಥಿ ಗಾಯತ್ರಿ ಸಿದ್ದೇಶ್ವರ ಪರ ಕೆಲಸ ಮಾಡಿದ್ದಾಗಿ ಧರ್ಮಸ್ಥಳವಷ್ಟೇ ಅಲ್ಲ, ಎಲ್ಲ ಹಿಂದು ದೇವಾಲಯಗಳಿಗೂ ಬಂದು ಪ್ರಮಾಣ ಮಾಡಲು ನಾವು ಸಿದ್ಧ. ವಿಧಾನಸಭೆ ಚುನಾವಣೆಯಲ್ಲಿ ದಾವಣಗೆರೆ ಉತ್ತರ, ದಕ್ಷಿಣ ಕ್ಷೇತ್ರಗಳಲ್ಲಿ ಲೋಕಿಕೆರೆ ನಾಗರಾಜ, ಬಿ.ಜಿ.ಅಜಯಕುಮಾರ ಪರ ಕೆಲಸ ಮಾಡಿದ್ದಾಗಿ ನೀವೂ ಬಂದು ಪ್ರಮಾಣ ಮಾಡಿ ಎಂದು ಮಾಜಿ ಸಂಸದ ಜಿ.ಎಂ.ಸಿದ್ದೇಶ್ವರ ಮತ್ತು ಜಿಎಂಐಟಿ ಬಾಯ್ಸ್‌ಗೆ ಹೊನ್ನಾಳಿ, ಚನ್ನಗಿರಿ ಕ್ಷೇತ್ರಗಳ ಬಿಜೆಪಿ ಮುಖಂಡರು ಪಂಥಾಹ್ವಾನ ನೀಡಿದ್ದಾರೆ.