ಸ್ವಂತ ಮನೆಯಲ್ಲೇ ಕದ್ದ ಕಳ್ಳಿ, ಸಹಚರ ಈಗ ಪೊಲೀಸರ ಅತಿಥಿ!ಪರಿಚಯಸ್ಥನೊಂದಿಗೆ ಸೇರಿ ತನ್ನದೇ ಮನೆಯಲ್ಲಿ ಕಳವು ಕೃತ್ಯ ನಡೆಸಿದ್ದ ಯುವತಿ ಹಾಗೂ ಸಹಚರನನ್ನು ಬಂಧಿಸಿರುವ ಪೊಲೀಸರು, ಸುಮಾರು ₹10.77 ಲಕ್ಷ ಮೌಲ್ಯದ ಸ್ವತ್ತು ವಶಪಡಿಸಿಕೊಂಡಿದ್ದಾರೆ. ಜಿಲ್ಲೆಯ ಚನ್ನಗಿರಿ ತಾಲೂಕು ಅಗರಬನ್ನಿಹಟ್ಟಿ ಗ್ರಾಮದ ತಸ್ಮೀಯ ಖಾನಂ (26), ಶಿವಮೊಗ್ಗ ಇಲಿಯಾಜ್ ನಗರ ಮೂಲದ ಹಾಲಿ ಬೆಂಗಳೂರು ರಾಜಾಜಿನಗರ ನಿವಾಸಿ ಮುಜೀಬುಲ್ಲಾ ಶೇಖ್ (42) ಬಂಧಿತರು.