ವಚನ ಸಾಹಿತ್ಯ ಮಹತ್ವ ಸಾರುವ ಶರಣರ ಶಕ್ತಿಉತ್ತರ ಭಾರತದಿಂದಲೇ ಮಹಾನ್ ಮಾನವತಾವಾದಿ, ಮಹಾನ್ ಶರಣ ಬಸವಣ್ಣನವರ ಹತ್ಯೆಗೆ ಸಂಚು ಹಾಕಿ ವ್ಯಕ್ತಿಯೊಬ್ಬನನ್ನು ಕಳಿಸುವ ದೃಶ್ಯದೊಂದಿಗೆ ಆರಂಭವಾಗುವ ಶರಣರ ಶಕ್ತಿ ಸಿನಿಮಾ ಕಥೆ 12ನೇ ಶತಮಾನದ ಅನುಭವ ಮಂಟಪದ ಬಸವಾದಿ ಶರಣ-ಶರಣೆಯರ ಎದುರಿಸಿದ ಸವಾಲು, ಸಂಕಷ್ಟಗಳನ್ನು ತಿಳಿಸಿಕೊಡುವಲ್ಲಿ ಪ್ರಯತ್ನವಾಗಿದೆ ಎಂದು ವಿರಕ್ತ ಮಠದ ಶ್ರೀ ಬಸವಪ್ರಭು ಸ್ವಾಮೀಜಿ ನುಡಿದಿದ್ದಾರೆ.