ಪಿ.ಜೆ. ಬಡಾವಣೆ ವಕ್ಫ್ ದಾಖಲೆ ರದ್ದುಪಡಿಸಿವಕ್ಫ್ ಮಂಡಳಿಯು ಪಿ.ಜೆ. ಬಡಾವಣೆಯ 4.13 ಎಕರೆ ಜಾಗವನ್ನು ವಕ್ಫ್ ಆಸ್ತಿಯೆಂದು ಪಹಣಿ ತಿದ್ದುಪಡಿ ಮಾಡಿ, ವ್ಯವಸ್ಥಿತವಾಗಿ ಕಬಳಿಸುವ ಹುನ್ನಾರ ನಡೆಸಿದೆ. ಕಾಂಗ್ರೆಸ್ಸಿಗೆ ಜನರ ಬಗ್ಗೆ ನಿಜವಾದ ಕಳಕಳಿ ಇದ್ದರೆ ರಾಜ್ಯ ಸಚಿವ ಸಂಪುಟ ಸಭೆಯಲ್ಲಿ ಪಹಣಿ, ಮುಟೇಷನ್ ಇತರೆ ಸರ್ಕಾರಿ ದಾಖಲೆಗಳಲ್ಲಿ ವಕ್ಫ್ ಮಂಡಳಿ ಎಂದು ನಮೂದಾಗಿರೋದನ್ನು ರದ್ದುಪಡಿಸಿ, ನಿರ್ಣಯ ಕೈಗೊಳ್ಳಲಿ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಎನ್.ರಾಜಶೇಖರ ನಾಗಪ್ಪ ಒತ್ತಾಯಿಸಿದ್ದಾರೆ.