ರೈತ ಸಂಘ ಪ್ರತಿಭಟನೆ: ಒತ್ತುವರಿ ತೆರವಿಗೆ ಬಂದ ಜೆಸಿಬಿಗಳು ಹಿಂದಕ್ಕೆತಾಲೂಕಿನ ಶೃಂಗಾರಬಾಗು, ಕಂಚುಗಾರ್ತಿ ಕಟ್ಟೆ ಸರ್ವೆ ನಂಬರ್ 16ರಲ್ಲಿ ಇರುವ 52 ಎಕರೆ ಜಮೀನನ್ನು ವಶಪಡಿಸಿಕೊಳ್ಳಲು ಅರಣ್ಯ ಇಲಾಖೆಗೆ ಮುಂದಾಗಿತ್ತು. ಬಡ ರೈತರು ಬಗರ್ ಹುಕ್ಕುಂ ಆಗಿ ಸಾಗುಮಾಡಿದ್ದ ಜಮೀನನ್ನು ಬಿಡಿಸಲು ಶನಿವಾರ ಕಾರ್ಯಚರಣೆಗೆ ಮುಂದಾದಾಗ ತಾಲೂಕಿನ ರೈತ ಸಂಘದ ಅಧ್ಯಕ್ಷ ಯಲೋದಹಳ್ಳಿ ರವಿಕುಮಾರ್ ನೇತೃತ್ವದಲ್ಲಿ ಸಂಘದ ಕಾರ್ಯಕರ್ತರು ಸ್ಥಳಕ್ಕೆ ಭೇಟಿ ನೀಡಿ ಅರಣ್ಯ ಇಲಾಖೆಯವರು ಜಮೀನನ್ನು ವಶ ಪಡಿಸಿಕೊಳ್ಳಲು ತಂದಿದ್ದ ಮೂರು ಜೆಸಿಬಿ ಯಂತ್ರಗಳನ್ನು ವಾಪಸ್ ಕಳಿಸಿದರು.