ಊರು, ಕೇರಿ, ನಗರದೆಲ್ಲೆಡೆ ಗಿಡ-ಮರಗಳ ಪೋಷಣೆ ಕಡ್ಡಾಯವಾಗಲಿಬೇಸಿಗೆಯ ಸುಡುಬಿಸಿಲ ಬೇಗೆಗೆ ಬೇಸತ್ತು, ಬಸವಳಿದ ಜನತೆಗೆ ನೆರಳಿನ ಆಸರೆ ನೀಡುತ್ತಿರುವ ನಗರದ ಜೆ.ಎಚ್. ಪಟೇಲ್ ಬಡಾವಣೆಯ ಸಾಲು ಮರಗಳು ಜನ -ಜಾನುವಾರುಗಳಿಗೆ ಪರಿಸರದ ಅಗತ್ಯ ಎಷ್ಟಿದೆ ಎಂಬುದನ್ನು ಒತ್ತಿಹೇಳುತ್ತಿವೆ. ಇಂತಹ ವಾತಾವರಣ ಊರು, ಕೇರಿ, ನಗರ, ರಾಜ್ಯ, ದೇಶ ಸೇರಿದಂತೆ ಎಲ್ಲೆಡೆ ನಿರ್ಮಾಣಗೊಂಡರೆ ಎಷ್ಟೊಂದು ಚೆನ್ನಾಗಿರುತ್ತದೆ ಎಂದು ಸಾಹಿತಿ ಗಂಗಾಧರ ಬಿ.ಎಲ್. ನಿಟ್ಟೂರು ಅಭಿಪ್ರಾಯಪಟ್ಟಿದ್ದಾರೆ.