ಕನಿಷ್ಠ ಬೆಂಬಲ ಬೆಲೆಯಿಂದ ರೈತರ ಉಳಿವು: ಹುಚ್ಚವ್ವನಹಳ್ಳಿ ಮಂಜುನಾಥಕನಿಷ್ಟ ಬೆಂಬಲ ಬೆಲೆಗೆ ಕಾಯ್ದೆ ಮಾಡದೇ ಕೇಂದ್ರ ಸರ್ಕಾರ 29 ರು.ಗೆ ಅಕ್ಕಿ, ರಾಜ್ಯ ಸರ್ಕಾರ ಉಚಿತ ಅಕ್ಕಿ ಘೋಷಣೆ ಮಾಡಿದರೆ, ರೈತ ಯಾವ ದರಕ್ಕೆ ಭತ್ತ ಮಾರಬೇಕು? ಖರೀದಿದಾರರು ಯಾವ ದರಕ್ಕೆ ಖರೀದಿಸಬೇಕೆಂಬುದೇ ಗೊತ್ತಾಗದೇ, ಮಾರುಕಟ್ಟೆಯಲ್ಲಿ ಭತ್ತ ಖರೀದಿದಾರರೇ ಇಲ್ಲದಂತಾಗಿದೆ. ಕಳೆದ ಮುಂಗಾರಿಗೆ ಬೆಳೆದ ಭತ್ತವನ್ನು ಈಗಾಗಲೇ ರೈತರು ಖರೀದಿದಾರರಿಗೆ ಮಾರಾಟ ಮಾಡಿದ್ದು, ಖರೀದಿದಾರರಿಂದ ರೈತರಿಗೆ ಹಣ ಪಾವತಿಯಾಗಿರುವುದಿಲ್ಲ.