ಸಂತ ಸೇವಾಲಾಲ್ 285ನೇ ಜಯಂತ್ಯುತ್ಸವ ಸಂಪನ್ನಹೋಮದ ಧಾರ್ಮಿಕ ವಿಧಿ, ವಿಧಾನಗಳ ಮಹಾರಾಷ್ಟ್ರ ಪೌರಾಗಡ್ನ ರಾಮ್ರಾವ್ ಮಹಾರಾಜರ ಉತ್ತರಾಧಿಕಾರಿ ಬಾಬುಸಿಂಗ್ ಮಹಾರಾಜರ ನೇತೃತ್ವದಲ್ಲಿ ಸೇವಾಲಾಲ್ ದೇವಸ್ಥಾನದ ಆರ್ಚಕ ಸೇವ್ಯಾನಾಯ್ಕ, ಮರಿಯಮ್ಮ ದೇವಸ್ಥಾನದ ಆರ್ಚಕ ಮಂಜುನಾಥ ನಾಯ್ಕ ಮತ್ತು ವಿವಿಧ ಸಾಧು ಸಂತರು ನೆರವೇರಿಸಿದರು. ಲೋಕಕಲ್ಯಾಣಾರ್ಥವಾಗಿ ಸಾಮೂಹಿಕ ಪ್ರಾರ್ಥನೆಯಲ್ಲಿ ‘ಸಕಲ ಜೀವರಾಶಿಗಳಿಗೆ ಒಳ್ಳೆಯದಾಗಲಿ, ಮಳೆ,ಬೆಳೆ ಸಮೃದ್ಧಿಯಾಗಿ, ಜನತೆ ಶಾಂತಿ, ಸೌಹಾರ್ದದಿಂದ ಬಾಳುವಂತಾಗಲಿ’ ಎಂದು ಪ್ರಾರ್ಥಿಸಿದರು.