ನಾಳೆಯಿಂದ ಸೂರಗೊಂಡನಕೊಪ್ಪ ಸಂತ ಸೇವಾಲಾಲ್ ಜಯಂತಿ: ರಾಘವೇಂದ್ರ ನಾಯ್ಕ14ರಂದು ಪೂರ್ಣಕುಂಭ ಮೆರವಣಿಗೆ, ಮಾತಾ ಮರಿಯಮ್ಮ ದೇವಿಗೆ ಅಭಿಷೇಕ, ಅಲಂಕಾರ, ಸಂತ ಸೇವಾಲಾಲ್ ಮೂರ್ತಿಗೆ ಅಭಿಷೇಕ, ಅಲಂಕಾರ, ಉಭಯ ದೇವಸ್ಥಾನಗಳಲ್ಲಿ ವಾಜಾ ಭಜನ್, ಸಮುದಾಯದ ಸಾಮೂಹಿಕ ಪ್ರಾರ್ಥನೆ, ಆಗಮಿತ ಮಾಲಾಧಾರಿಗಳಿಗೆ ದರ್ಶನ ಹಾಗೂ ಸೇವಾ ಸಂದೇಶ, ಮಹಾ ಮಂಗಳಾರತಿ, ಉತ್ಸವ ಮೂರ್ತಿಯ ಪ್ರತಿಷ್ಟಾಪನೆಯೊಂದಿಗೆ ಪಲ್ಲಕ್ಕಿ ಉತ್ಸವ, ನಿರಂತರವಾಗಿ ಮಾಲಾಧಾರಿಗಳಿಂದ ಮಾಲೆ ಇರುಮುಡಿಗಳ ಸಮರ್ಪಣಾ ಕಾರ್ಯಕ್ರಮ ನಡೆಯಲಿದೆ.