ಸಾಮಾಜಿಕ ತಲ್ಲಣಗಳಿಗೆ ಶಾಂತಿ, ನೆಮ್ಮದಿ ತಂದವರು ಬಸವಣ್ಣ: ಡಾ.ಗುರುಬಸವ ಸ್ವಾಮೀಜಿಬಸವಣ್ಣನವರ ಮೇರು ವ್ಯಕ್ತಿತ್ವ ಪರಿಗಣಿಸಿದ ರಾಜ್ಯ ಸರ್ಕಾರ ಬಸವಣ್ಣನವರನ್ನು ಸಾಂಸ್ಕೃತಿಕ ನಾಯಕ ಎಂದು ಘೋಷಿಸಿರುವುದು ಸಂತಸ ತಂದಿದೆ. ಆರ್ಥಪೂರ್ಣವಾದ ವಚನಕಾರರ ಸತ್ಯ, ಶುದ್ದ, ಕಾಯಕ, ಅರಿವು, ಆಚಾರ, ವಿವೇಕದ ಮೂಲಕ ತಾತ್ವಿಕ ತಳಪಾಯದ ಮೇಲೆ ಸಾತ್ವಿಕ ಸಮಾಜವನ್ನು ನಿರ್ಮಾಣ ಮಾಡಿದವರೇ ಬಸವಾದಿ ಶಿವಶರಣರು.