ಬಂಜಾರ ಸಮಾಜದ ಮೇಲಿನ ದಬ್ಬಾಳಿಕೆ, ಮತಾಂತರ ತಡೆಯಿರಿ: ಸೇವಾಲಾಲ್ ಸ್ವಾಮೀಜಿಬಂಜಾರ ಸಮಾಜದ ಯುವತಿ ಜ್ಯೋತಿಬಾಯಿ ಹಾಗೂ ಆಕೆಯ ಕುಟುಂಬವನ್ನು ಹೆದರಿಸಿ, ಬೆದರಿಸಿ, ವಿವಿಧ ಆಸೆ, ಆಮಿಷವೊಡ್ಡಿ, ಸುಮಾರು 5 ವರ್ಷದಿಂದ ಯುವತಿ ಹಾಗೂ ಆಕೆಯ ಕುಟುಂಬದವರ ಮತಾಂತರ ಮಾಡಿ, ಮದುವೆಗೆ ಒಪ್ಪಿಸಲು ಪ್ರಯತ್ನ ನಡೆದಿದೆ. ಬಿ.ರಾಜಶೇಖರ ತಮ್ಮ ವೈಯಕ್ತಿಕ ದಾಖಲಾತಿ ನೈಜವಾಗಿ ತೋರಿಸದೇ, ಸಮಾಜದ ಕಣ್ಣಿಗೆ ಮಣ್ಣೆರೆಚುತ್ತಿದ್ದಾರೆ. ಜ್ಯೋತಿಬಾಯಿ ಜೊತೆಗೆ ಮದುವೆಯಾಗಿದ್ದನ್ನು ವಿವಾಹ ನೋಂದಣಿ ಮಾಡಿದ್ದನ್ನು ರದ್ದುಪಡಿಸಬೇಕು.