ತುಮಕೂರಿನಲ್ಲಿ 39ನೇ ರಾಜ್ಯಮಟ್ಟದ ಪತ್ರಕರ್ತರ ಸಮ್ಮೇಳನ ಆತಿಥ್ಯ: ಶಿವಾನಂದ ತಗಡೂರುಮುಂದಿನ ಬಾರಿ ನಡೆಯಲಿರುವ 39ನೇ ರಾಜ್ಯಮಟ್ಟದ ಪತ್ರಕರ್ತರ ಸಮ್ಮೇಳನ ನಡೆಸಲು ತುಮಕೂರು, ಶಿವಮೊಗ್ಗ, ಗಡಿಭಾಗದ ಜಿಲ್ಲೆಯಾದ ರಾಯಚೂರಿನಲ್ಲಿ ಮುಂದಿನ ಪತ್ರಕರ್ತರ ಸಮ್ಮೇಳನ ನಡೆಸಲು ಭಾರೀ ಬೇಡಿಕೆ ಬಂದಿದ್ದು, ಗಡಿ ಜಿಲ್ಲೆಗಳಾದ ಕಲಬುರಗಿ, ವಿಜಯಪುರ ಮತ್ತು ಕರಾವಳಿಯಲ್ಲೂ ನಾವು ಸಮ್ಮೇಳನ ಮಾಡಿದ್ದೇವೆ. ಈಗ ಶಿವಮೊಗ್ಗ, ತುಮಕೂರು ಮತ್ತು ರಾಯಚೂರು ಜಿಲ್ಲೆಗಳಿಂದ ಸಾಕಷ್ಟು ಪೈಪೋಟಿ ಬಂದಿದೆ.