ಮಾಚಿದೇವರು ಭಕ್ತಿ ಪರಾಕಾಷ್ಠೆಯಲ್ಲಿ ಹಿಮಾಲಯ ಪರ್ವತ: ಜಿಲ್ಲಾಧಿಕಾರಿ ಡಾ.ವೆಂಕಟೇಶ್ಶರಣರಾಗಿದ್ದ ಮಡಿವಾಳ ಮಾಚಿದೇವರು ತನ್ನ ಕುಲದ ಕಾಯಕ ಮಾಡುತ್ತಲೇ, ಸಮಾಜದ ಅನಿಷ್ಟ ಪಿಡುಗುಗಳ ವಿರುದ್ಧ ಹೋರಾಟ ಮಾಡಿ ಉತ್ತಮ ಸಮಾಜ ನಿರ್ಮಾಣಕ್ಕೆ ಶ್ರಮಿಸಿದರು. ಅಂತಹ ಶ್ರೇಷ್ಠ ವ್ಯಕ್ತಿತ್ವದ ಮಾಚಿದೇವರ ಆದರ್ಶದಲ್ಲಿ ಸಾಗುವ ಮೂಲಕ ಬದುಕಿನ ಬಗ್ಗೆ ಅವರು ಹಾಕಿಕೊಟ್ಟ ಮಾರ್ಗದರ್ಶನ, ಬೋಧನೆ ಅನುಸರಿಸಿ, ಮುಂದಿನ ಪೀಳಿಗೆಗೆ ಉತ್ತಮ ವೇದಿಕೆ ನಿರ್ಮಾಣ ಮಾಡಬೇಕಾಗಿದೆ.