ಶ್ರೀರಾಮನ ಭಕ್ತರ ಕಂಡರೆ ಸಿದ್ದು, ಡಿಕೆಶಿ ಆಗಲ್ಲ: ರೇಣುಕಾಚಾರ್ಯಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ ಹೆಸರಿನಲ್ಲಿ ಶಿವ ಇದೆ. ಆದರೆ, ಅದೇ ಡಿಕೆಶಿ ಶಿವನಿಗೆ ವಿರುದ್ಧವಾಗಿದ್ದಾರೆ. ಶಿವಕುಮಾರವರೆ ನಿಮ್ಮ ಕೊರಳಲ್ಲಿ ಮಿಡಿ ನಾಗರ ಹಾವು ಇದೆ. ಹಿಂದುಗಳನ್ನು ನೀವೂ ಸಹ ದ್ವೇಷ ಮಾಡುತ್ತಿದ್ದೀರಿ. ಸಿಎಂ ಸಿದ್ದರಾಮಯ್ಯ ಹೆಸಿರನಲ್ಲಿ ರಾಮ ಇದೆ. ಆದರೆ, ಅದೇ ಸಿದ್ದರಾಮಯ್ಯ ಬುಡಕಟ್ಟು ಮಹಿಳೆ ಎಂಬುದಾಗಿ ರಾಷ್ಟ್ರಪತಿ ದ್ರೌಪದಿ ಮುರ್ಮುರವರ ಬಗ್ಗೆ ಏಕವಚನದಲ್ಲಿ ಮಾತನಾಡಿ, ಅವಮಾನಿಸಿದ್ದಾರೆ.