ಅಚ್ಚುಕಟ್ಟು ಕೊನೆಭಾಗಕ್ಕೆ ನೀರಿಲ್ಲ; ರೈತರ ಪ್ರತಿಭಟನೆ ಭದ್ರಾ ಅಣೆಕಟ್ಟೆಯಿಂದ ನಾಲೆಗೆ ನೀರು ಬಿಟ್ಟು 12 ದಿನಗಳಾದರೂ ಅಚ್ಚುಕಟ್ಟು ಕೊನೆ ಭಾಗಕ್ಕೆ ನೀರು ತಲುಪಿಲ್ಲ. ತ್ಯಾವಣಿಗೆ 2ನೇ ನಾಲಾ ಉಪ ವಿಭಾಗದ ವ್ಯಾಪ್ತಿಯ ಕಂದಗಲ್ಲು, ಶ್ಯಾಗಲೆ, ಹೂವಿನಮಡು, ಮತ್ತಿ, ಗೋಣಿವಾಡ, ಹೊನ್ನಮರಡಿ, ಕುಕ್ಕುವಾಡ, ಕೊಳೇನಹಳ್ಳಿ, ನಾಗರಸನಹಳ್ಳಿ ಭಾಗಕ್ಕೆ ಇಂದಿಗೂ ನೀರು ತಲುಪಿಲ್ಲ.