ಪಾಲಿಕೆಯಿಂದ ಶ್ರೀರಾಮ ಫ್ಲೆಕ್ಸ್ ತೆರವು; ಬಿಜೆಪಿ ಆಕ್ರೋಶಭಗವಾಧ್ವಜ, ಶ್ರೀರಾಮನ ಕಟೌಟ್, ಬ್ಯಾನರ್, ಬಂಟಿಂಗ್ಸ್‌ಗಳನ್ನು ಬಲವಂತವಾಗಿ ಕಿತ್ತು ಹಾಕುವುದು ಹಿಂದೂಗಳ ಭಾವನೆಗೆ ಧಕ್ಕೆಯಾಗುತ್ತಿದೆ. ಪಾಲಿಕೆ ಆಯುಕ್ತರು, ಅಧಿಕಾರಿಗಳು ಕಾಂಗ್ರೆಸ್ ಸರ್ಕಾರದ ಏಜೆಂಟರಂತೆ ಕೆಲಸ ಮಾಡಬಾರದು. ಸರ್ಕಾರ ಮೌಖಿಕ ಆದೇಶ ನೀಡಿದೆಯೆಂದರೆ, ಅದನ್ನು ಹಿಂದೂಗಳು ಸಹಿಸಲ್ಲ.